
ತೀರ್ಥಹಳ್ಳಿ ಕ್ಷೇತ್ರದಲ್ಲಿ ರಾಷ್ಟ್ರೀಯತೆಯ ಬೇರುಗಳನ್ನು ಗಟ್ಟಿಗೊಳಿಸಿದ ಹಿರಿಯ ಚೇತನ, ನಮ್ಮೆಲ್ಲರ ಮಾರ್ಗದರ್ಶಕರಾಗಿದ್ದ ನಗರವಳ್ಳಿ ಶಂಕರ್ ನಾರಾಯಣ ಐತಾಳರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ನಮ್ಮ ಪಕ್ಷದ ಸಂಘಟನೆಗೆ ಆಧಾರಸ್ತಂಭವಾಗಿದ್ದ ಅವರು, ಸುಧೀರ್ಘ ಅವಧಿಯವರೆಗೆ ಖಜಾಂಚಿಯಾಗಿ ಸೇವೆ ಸಲ್ಲಿಸಿ, ತನು-ಮನ-ಧನವನ್ನು ಸಮಾಜ ಮತ್ತು ರಾಷ್ಟ್ರ ಕಾರ್ಯಕ್ಕೆ ಅರ್ಪಿಸಿದ ಮಹನೀಯರು. ನೂರಾರು ಕಾರ್ಯಕರ್ತರನ್ನು ಬೆಳೆಸಿ ಪೋಷಿಸಿದ ಅವರ ನಿಸ್ವಾರ್ಥ ಸೇವೆ, ಆದರಾತಿಥ್ಯ ಮತ್ತು ಪಕ್ಷಾತೀತವಾದ ಜನಪ್ರಿಯತೆ ಸದಾ ಸ್ಮರಣೀಯ. ಅವರ ಅಗಲಿಕೆಯಿಂದ ತೀರ್ಥಹಳ್ಳಿ ತಾಲೂಕಿನ ಸಾಮಾಜಿಕ ಮತ್ತು ಸಂಘಟನಾತ್ಮಕ ಬದುಕಿಗೆ ತುಂಬಲಾರದ ನಷ್ಟವಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬವರ್ಗದವರಿಗೆ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ. 🙏






























