
ಕರ್ನಾಟಕದ ಹಳ್ಳಿಗಳ ಅಭಿವೃದ್ಧಿಗೆ ₹16,000 ಕೋಟಿ ನಾಡಿನ ಗ್ರಾಮೀಣ ಭಾಗದ ಚಿತ್ರಣವನ್ನೇ ಬದಲಿಸುವ ಸಂಕಲ್ಪದೊಂದಿಗೆ ರಾಜ್ಯ ಸರ್ಕಾರ ₹16,000 ಕೋಟಿ ವೆಚ್ಚದಲ್ಲಿ ಮಹತ್ವದ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಿದೆ. 31 ಜಿಲ್ಲೆಗಳಲ್ಲಿ 15,000 ಕಿ.ಮೀ. ಗ್ರಾಮೀಣ ರಸ್ತೆ ಅಭಿವೃದ್ಧಿ, ಸಿಸಿ ರಸ್ತೆ ಹಾಗೂ ಚರಂಡಿಗಳ ನಿರ್ಮಾಣದ ಮೂಲಕ ಹಳ್ಳಿಗಳಿಗೆ ಸುಗಮ ಸಂಪರ್ಕ, ಸ್ವಚ್ಛತೆ ಮತ್ತು ಹೊಸ ಅಭಿವೃದ್ಧಿಯ ಸ್ಪರ್ಶ ನೀಡಲಾಗುತ್ತಿದೆ. ಇದಕ್ಕೆ ಪಾರದರ್ಶಕ ಟೆಂಡರ್, ಗುಣಮಟ್ಟದ ಕಾಮಗಾರಿ ಹಾಗೂ ಮೂರು ಹಂತದ ಪರಿಶೀಲನೆಯೊಂದಿಗೆ 15 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿಯಿದೆ.




































