←
M B Patil21,036 posts
M B Patil avatar

M B Patil

@MBPatil

Minister for Commerce & Industries, Infrastructure GoK | Educationist-Engineer-Basava Literature Enthusiast

◷ Joined October 2014▧ 13,244 Photos and videos
M B Patil avatar
M B Patil@MBPatil·2 Sep 2025

Happy to share that our Koti Vruksha Abhiyana-a model initiative ideated and executed in Vijayapura-has its inspiring story featured in #TheNewYorkTimes! An incredible story of a people’s movement: 1.5 crore trees planted, raising forest cover from just 0.17% to 2%. A true testament to political will, systemic action & the power of collective participation. Proud that Vijayapura’s green success is inspiring the world! My heartfelt thanks to all the stakeholders and the people of Vijayapura. nytimes.com/card/2025/09/02/…

Post attachmentPost attachmentPost attachmentPost attachment
M B Patil avatar
M B Patil@MBPatil·26m

ನವೋದ್ಯಮಗಳ ಹೊಸ ಕನಸುಗಳಿಗೆ ಬಲ; ಕರ್ನಾಟಕದಲ್ಲಿ 1000+ ಎಕರೆಯಲ್ಲಿ ಬೃಹತ್‌ ಸ್ಟಾರ್ಟಪ್‌ ಪಾರ್ಕ್‌ ನಿರ್ಮಾಣ ಜಾಗತಿಕ ಸ್ಟಾರ್ಟ್‌ಅಪ್‌ ನಕ್ಷೆಯಲ್ಲಿ ಈಗಾಗಲೇ ಮುಂಚೂಣಿಯಲ್ಲಿರುವ ಕರ್ನಾಟಕದ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ, ಬೆಂಗಳೂರಿನ ಸಮೀಪ 1,000 ಎಕರೆ ಹಾಗೂ ಹುಬ್ಬಳ್ಳಿ-ಧಾರವಾಡದ ಸಮೀಪ 100ರಿಂದ 200 ಎಕರೆ ವಿಸ್ತೀರ್ಣದಲ್ಲಿ ಮಾದರಿ ಸ್ಟಾರ್ಟ್‌ಅಪ್‌ ಪಾರ್ಕ್‌ಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸುತ್ತಿದ್ದೇವೆ. ಬೆಂಗಳೂರು ಟೆಕ್‌ ಸಮ್ಮಿಟ್‌ 2026ರ ಎರಡನೇ ದಿನವಾದ ಬುಧವಾರ ನವೋದ್ಯಮಗಳ ಸಂಸ್ಥಾಪಕರು ಹಾಗೂ ಹೂಡಿಕೆದಾರರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳು, ಅಗತ್ಯಗಳು ಮತ್ತು ನಿರೀಕ್ಷೆಗಳನ್ನು ಆಲಿಸಿದೆ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಭೂಮಿಯ ಬೆಲೆಗಳು ನವೋದ್ಯಮಗಳ ಬೆಳವಣಿಗೆಗೆ ಸವಾಲಾಗುತ್ತಿರುವುದನ್ನು ಮನಗಂಡು, ಕೈಗೆಟುಕುವ ದರದಲ್ಲಿ ಕೈಗಾರಿಕಾ ನಿವೇಶನಗಳನ್ನು ಒದಗಿಸುವ ಉದ್ದೇಶದಿಂದ ಈ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸುವ ಚಿಂತನೆ ನಮ್ಮ ಮುಂದಿದೆ. ಹೊಸ ಆಲೋಚನೆಗಳಿಗೆ ಸೂಕ್ತ ವೇದಿಕೆ, ನವೋದ್ಯಮಗಳಿಗೆ ಅಗತ್ಯ ಮೂಲಸೌಕರ್ಯ, ಯುವ ಉದ್ಯಮಿಗಳಿಗೆ ಉತ್ತೇಜನ ಹಾಗೂ ಅರ್ಹ ನವೋದ್ಯಮಗಳಿಗೆ ಹೆಚ್ಚುವರಿ ಶೇ.5ರಷ್ಟು ಸಹಾಯಧನದ ಮೂಲಕ ಉದ್ಯಮಶೀಲತೆಗೆ ಹೊಸ ಚೈತನ್ಯ ತುಂಬುವುದು ನಮ್ಮ ಗುರಿ. ಅಷ್ಟೇ ಅಲ್ಲ, ಏಕಗವಾಕ್ಷಿ ವ್ಯವಸ್ಥೆಯಡಿ ಈಗಾಗಲೇ 116 ಸೇವೆಗಳನ್ನು ಒದಗಿಸಲಾಗುತ್ತಿದ್ದು, ಈ ಸಂಖ್ಯೆಯನ್ನು 130ಕ್ಕೂ ಹೆಚ್ಚು ಸೇವೆಗಳಿಗೆ ವಿಸ್ತರಿಸುವ ಗುರಿ ಹೊಂದಿದ್ದೇವೆ. ಕೈಗಾರಿಕೆಗಳ ಅಗತ್ಯಕ್ಕೆ ತಕ್ಕಂತೆ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮವನ್ನು ಪರಿಷ್ಕರಿಸುವ ಮೂಲಕ ಉದ್ಯಮರಂಗಕ್ಕೆ ಅಗತ್ಯವಿರುವ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ರೂಪಿಸಲೂ ಒತ್ತು ನೀಡಲಾಗುವುದು. ನಮ್ಮ ಗುರಿ ಕೇವಲ ಬೆಂಗಳೂರಿನ ಬೆಳವಣಿಗೆಯಲ್ಲ; ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರತಿಯೊಂದು ಭಾಗದಲ್ಲೂ ನವೋದ್ಯಮ, ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಸಮಾನ ಅವಕಾಶಗಳನ್ನು ಕಲ್ಪಿಸಿ, ರಾಜ್ಯವನ್ನು ದೇಶದ ಪ್ರಮುಖ ಸ್ಟಾರ್ಟ್‌ಅಪ್‌ ತಾಣವನ್ನಾಗಿ ರೂಪಿಸುವುದಾಗಿದೆ. #BengaluruTechSummit2026 #StartupParks #beyondbengaluru

Post attachmentPost attachmentPost attachment
M B Patil avatar
M B Patil@MBPatil·2h

ದೃಢ ಸಂಕಲ್ಪ, ಅಚಲ ಧೈರ್ಯ, ದಿಟ್ಟ ನಿರ್ಧಾರ ಮತ್ತು ಅಪ್ರತಿಮ ನಾಯಕತ್ವದ ಮೂಲಕ ದೇಶದ ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಮಾಜಿ ಪ್ರಧಾನಿ, ಭಾರತರತ್ನ ಇಂದಿರಾ ಗಾಂಧಿ ಅವರ ಜನ್ಮದಿನದಂದು ಗೌರವದ ನಮನಗಳು. ದೇಶದ ಏಕತೆ, ಸಮಗ್ರ ಅಭಿವೃದ್ಧಿ, ಅಖಂಡತೆ ಮತ್ತು ಸ್ವಾವಲಂಬನೆಗಾಗಿ ಅವರು ತೋರಿದ ಬದ್ಧತೆ, ಸವಾಲುಗಳನ್ನು ಎದುರಿಸಿದ ದಿಟ್ಟತನ ಹಾಗೂ ರಾಷ್ಟ್ರದ ಹಿತಾಸಕ್ತಿಗೆ ನೀಡಿದ ಆದ್ಯತೆ ಸದಾ ಸ್ಮರಣೀಯ. ಅವರ ದೂರದೃಷ್ಟಿ, ಆತ್ಮವಿಶ್ವಾಸ ಮತ್ತು ನಿರ್ಣಾಯಕ ನಾಯಕತ್ವ ಮುಂದಿನ ಪೀಳಿಗೆಗೂ ಸ್ಫೂರ್ತಿಯ ಸೆಲೆಯಾಗಿರಲಿದೆ. #IndiraGandhi

Post attachment
M B Patil avatar
M B Patil@MBPatil·2h

ಅಪ್ರತಿಮ ಧೈರ್ಯ, ಅಸೀಮ ಸಾಹಸ, ಅಚಲ ದೇಶಪ್ರೇಮದ ಪ್ರತೀಕ, ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೆಚ್ಚೆದೆಯಿಂದ ಹೋರಾಡಿದ ವೀರವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಜಯಂತಿಯಂದು ಗೌರವದ ನಮನಗಳು. ಶೌರ್ಯ, ಸ್ವಾಭಿಮಾನ ಮತ್ತು ಹೋರಾಟದ ಕೆಚ್ಚಿಗೆ ಹೊಸ ಭಾಷ್ಯ ಬರೆದ ಅವರ ವೀರಗಾಥೆ ಭಾರತೀಯ ಇತಿಹಾಸದಲ್ಲಿ ಅಜರಾಮರ. #JhansiRaniLakshmiBai

Post attachment
M B Patil avatar
M B Patil@MBPatil·11h

ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳ ಮಾರ್ಗದರ್ಶನ ಜ.3ರಿಂದ ಎಲ್ಲ ಜಿಲ್ಲೆಗಳಲ್ಲಿ ಫ.ಗು.ಹಳಕಟ್ಟಿ ಜೀವನ-ಸಾಧನೆ ಅಭಿಯಾನ ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಅಮೂಲ್ಯ ಜೀವನ, ಸಾಹಿತ್ಯಿಕ ಕೊಡುಗೆ ಹಾಗೂ ವಚನ ಸಾಹಿತ್ಯದ ಸಂರಕ್ಷಣೆಗೆ ಅವರು ಸಲ್ಲಿಸಿದ ಅಪಾರ ಸೇವೆಯನ್ನು ರಾಜ್ಯದ ಜನತೆಗೆ, ವಿಶೇಷವಾಗಿ ಯುವಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಸುತ್ತೂರು ಮಠದ ಪೂಜ್ಯ ಶ್ರೀಗಳ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಅಭಿಯಾನ ಹಮ್ಮಿಕೊಳ್ಳಲು ಉದ್ದೇಶಿಸಿದ್ದೇನೆ. ಈ ಕುರಿತು ಇಂದು ಮೈಸೂರಿನಲ್ಲಿ ಸುತ್ತೂರು ಮಠದ ಪೂಜ್ಯ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು, ಅಭಿಯಾನದ ರೂಪುರೇಷೆಗಳ ಕುರಿತು ಚರ್ಚಿಸಿದೆ. ಇದೇ ಸಂದರ್ಭದಲ್ಲಿ ಫ.ಗು.ಹಳಕಟ್ಟಿ ಅವರು ಸಂಪಾದಿಸಿದ್ದ ಐತಿಹಾಸಿಕ 'ಶಿವಾನುಭವ' ಪತ್ರಿಕೆಯ ಮರುಸಂಪಾದಿತ ಆರು ಸಂಪುಟಗಳನ್ನು ಪೂಜ್ಯರಿಗೆ ಸಮರ್ಪಿಸಿದೆ. 2027ರ ಜನವರಿ 3ರಂದು ಮೈಸೂರಿನಲ್ಲಿ ಅಭಿಯಾನದ ಮೊದಲ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಚಾರ ಸಂಕಿರಣ ಹಾಗೂ ಉಪನ್ಯಾಸಗಳನ್ನು ಆಯೋಜಿಸಲಾಗುವುದು. ಏಪ್ರಿಲ್ 26ರಂದು ವಿಜಯಪುರದಲ್ಲಿ ಕೊನೆಯ ಜಿಲ್ಲಾ ಮಟ್ಟದ ಕಾರ್ಯಕ್ರಮ ಜರುಗಲಿದ್ದು, ಮೇ 16ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸಮಾರಂಭದಲ್ಲಿ 'ಶಿವಾನುಭವ' ಪತ್ರಿಕೆಯ ಎಲ್ಲ 35 ಸಂಪುಟಗಳನ್ನು ಲೋಕಾರ್ಪಣೆಗೊಳಿಸಲಾಗುವುದು. ವಚನ ಸಾಹಿತ್ಯದ ಮಹತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸುವುದರ ಜೊತೆಗೆ, ಫ.ಗು. ಹಳಕಟ್ಟಿ ಅವರ ಮಹಾನ್ ಕೊಡುಗೆ ಮತ್ತು ಆದರ್ಶಗಳನ್ನು ನಾಡಿನಾದ್ಯಂತ ಪಸರಿಸುವುದು ಈ ಅಭಿಯಾನದ ಆಶಯವಾಗಿದೆ. ನಮ್ಮ ನಾಡಿನ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಈ ಪ್ರಯತ್ನಕ್ಕೆ ಎಲ್ಲರ ಸಹಕಾರ, ಬೆಂಬಲ ಕೋರುತ್ತೇನೆ. ಹಿರಿಯ ವಿದ್ವಾಂಸರಾದ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಹಾಗೂ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಪದಾಧಿಕಾರಿಗಳು, ಬೆಂಗಳೂರು ನಗರದ ಮಾಜಿ ಉಪ ಮೇಯರ್ ಶ್ರೀ ಸಿ ಎಸ್ ಪುಟ್ಟರಾಜು, ಮುಖಂಡರಾದ ಶ್ರೀ ಮಲ್ಲಿಕಾರ್ಜುನ, ಶ್ರೀ ಮಹಾಂತೇಶ ಬಿರಾದರ ಸೇರಿದಂತೆ ಇತರರು ಇದ್ದರು.

Post attachmentPost attachmentPost attachmentPost attachment
M B Patil avatar
M B Patil@MBPatil·14h

Karnataka Leading the Way in Future Technologies: Bengaluru Tech Summit 2026! Attended Bengaluru Tech Summit 2026 at BIEC and witnessed groundbreaking innovations shaping our technological future. I am proud to see Karnataka bringing together representatives from 65+ countries, 10,000+ delegates, 1,500+ exhibitors, and 1,000+ startups on a single global platform. With 140+ sessions across 16 thematic tracks, I see this summit as a remarkable opportunity to foster innovation, attract investments and strengthen global partnerships. I am particularly inspired by the creativity of our startups, the immense potential of our young talent and Karnataka’s growing leadership in AI and digital technologies. I firmly believe Karnataka will continue to lead the way in shaping the future of technology. @PriyankKharge #BengaluruTechSummit2026 #BTS2026 #BIEC

Post attachmentPost attachmentPost attachmentPost attachment
M B Patil avatar
M B Patil@MBPatil·15h

ಭವಿಷ್ಯದ ತಂತ್ರಜ್ಞಾನಕ್ಕೆ ಕರ್ನಾಟಕ ದಿಕ್ಸೂಚಿ; ಜಾಗತಿಕ ಆವಿಷ್ಕಾರಗಳ ಮಹಾಸಂಗಮ 'ಬೆಂಗಳೂರು ಟೆಕ್ ಸಮ್ಮಿಟ್ 2026'! ಏಷ್ಯಾದ ಬೃಹತ್ ತಂತ್ರಜ್ಞಾನ ಸಮಾವೇಶವಾದ ಬೆಂಗಳೂರು ಟೆಕ್ ಸಮ್ಮಿಟ್ 2026, ಕರ್ನಾಟಕದ ಬಲಿಷ್ಠ ತಂತ್ರಜ್ಞಾನ ಮತ್ತು ಉದ್ಯಮ ಪರಿಸರ ವ್ಯವಸ್ಥೆಯನ್ನು ಜಾಗತಿಕ ವೇದಿಕೆಯಲ್ಲಿ ಅನಾವರಣಗೊಳಿಸುವುದರೊಂದಿಗೆ, ಭಾರತದ ತಂತ್ರಜ್ಞಾನ ಕ್ಷೇತ್ರದ ಸಾಮರ್ಥ್ಯ ಮತ್ತು ಸಾಧನೆಗೆ ಹೊಸ ಆಯಾಮ ನೀಡುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (BIEC) ರಾಜ್ಯದ ಐಟಿ-ಬಿಟಿ ಇಲಾಖೆಯ ವತಿಯಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಈ ಪ್ರತಿಷ್ಠಿತ ಸಮಾವೇಶದಲ್ಲಿ ಪಾಲ್ಗೊಂಡು ತಂತ್ರಜ್ಞಾನದ ಹೊಸ ಸೃಷ್ಟಿಗಳನ್ನು ವೀಕ್ಷಿಸಿದ್ದು ಸಂತಸ ತರಿಸಿತು. ಈ ಬಾರಿಯ ಸಮಾವೇಶದಲ್ಲಿ 65ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, 10,000ಕ್ಕೂ ಹೆಚ್ಚು ನಿಯೋಗದ ಸದಸ್ಯರು, 700ಕ್ಕೂ ಹೆಚ್ಚು ಗಣ್ಯರು ಹಾಗೂ 1,500ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುತ್ತಿದ್ದಾರೆ. ಮೂರು ದಿನಗಳಲ್ಲಿ 50,000ಕ್ಕೂ ಹೆಚ್ಚು ಸಂದರ್ಶಕರು ಆಗಮಿಸುವ ನಿರೀಕ್ಷೆಯಿದೆ. 16 ವಿಷಯಾಧಾರಿತ ವಿಭಾಗಗಳು ಮತ್ತು 13 ವೇದಿಕೆಗಳಲ್ಲಿ 140ಕ್ಕೂ ಹೆಚ್ಚು ಜ್ಞಾನಗೋಷ್ಠಿಗಳು ನಡೆಯುತ್ತಿವೆ. 30ಕ್ಕೂ ಹೆಚ್ಚು ಕ್ಷೇತ್ರಗಳನ್ನು ಪ್ರತಿನಿಧಿಸುವ 100 ನಗರಗಳ 1,000ಕ್ಕೂ ಹೆಚ್ಚು ನವೋದ್ಯಮಗಳು ತಮ್ಮ ಆವಿಷ್ಕಾರ ಮತ್ತು ಉದ್ಯಮಶೀಲತೆಯ ಸಾಮರ್ಥ್ಯವನ್ನು ಅನಾವರಣಗೊಳಿಸುತ್ತಿವೆ. ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕ ಈಗಾಗಲೇ ಮುಂಚೂಣಿಯಲ್ಲಿದೆ. ಬೆಂಗಳೂರು ಟೆಕ್ ಸಮ್ಮಿಟ್ ಈ ನಾಯಕತ್ವಕ್ಕೆ ಮತ್ತಷ್ಟು ಶಕ್ತಿ ತುಂಬುವುದರೊಂದಿಗೆ, ಹೊಸ ಆವಿಷ್ಕಾರ ಮತ್ತು ಜಾಗತಿಕ ಸಹಭಾಗಿತ್ವಕ್ಕೆ ಹೊಸ ಅವಕಾಶಗಳನ್ನು ತೆರೆದಿಟ್ಟಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತು ಸಾಧಿಸುತ್ತಿರುವ ಕ್ಷಿಪ್ರ ಪ್ರಗತಿ, ನಮ್ಮ ಯುವ ಪ್ರತಿಭೆಗಳ ಅಗಾಧ ಸಾಮರ್ಥ್ಯ ಮತ್ತು ನವೋದ್ಯಮಗಳ ಸೃಜನಶೀಲತೆ ಹೆಮ್ಮೆಯ ಸಂಗತಿ. ಇಂತಹ ಜಾಗತಿಕ ವೇದಿಕೆಗಳು ಜ್ಞಾನ ವಿನಿಮಯಕ್ಕೆ ಮಾತ್ರವಲ್ಲದೆ, ಹೊಸ ಆಲೋಚನೆಗಳಿಗೆ ಉತ್ತೇಜನ ನೀಡಲು, ಹೂಡಿಕೆ ಆಕರ್ಷಿಸಲು ಹಾಗೂ ಉದ್ಯಮಗಳ ನಡುವಿನ ಸಹಭಾಗಿತ್ವವನ್ನು ಬಲಪಡಿಸಲು ಮಹತ್ವದ ಅವಕಾಶ ಕಲ್ಪಿಸುತ್ತವೆ. @PriyankKharge #BengaluruTechSummit2026 #BTS2026 #BIEC

Post attachmentPost attachmentPost attachmentPost attachment
M B Patil avatar
M B Patil@MBPatil·17h

ಕೇಂದ್ರ ಸಚಿವರಾದ ಶ್ರೀ ಕುಮಾರಸ್ವಾಮಿಯವರು ರಾಜ್ಯದ ಕೈಗಾರಿಕಾ ವಾತಾವರಣಕ್ಕೆ ಧಕ್ಕೆಯಾಗುವಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಹೋಂಡಾ ಕಂಪನಿಯ ಪ್ರತಿನಿಧಿಗಳು ತಮ್ಮನ್ನು ಭೇಟಿಯಾಗಿ, ಕರ್ನಾಟಕವನ್ನು ತೊರೆಯುವುದಾಗಿ ತಿಳಿಸಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಆದರೆ, ಹೋಂಡಾ ಕಂಪನಿಯ ಪ್ರತಿನಿಧಿಗಳು ನನ್ನನ್ನು ಭೇಟಿಯಾದ ಸಂದರ್ಭದಲ್ಲಿ, ತಾವು ಕುಮಾರಸ್ವಾಮಿಯವರನ್ನು ಭೇಟಿಯೇ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯ ಸರ್ಕಾರ, ವಿಶೇಷವಾಗಿ ಕೈಗಾರಿಕಾ ಇಲಾಖೆಯಿಂದ ದೊರೆಯುತ್ತಿರುವ ಸಹಕಾರ ಮತ್ತು ಬೆಂಬಲದ ಬಗ್ಗೆ ಕಂಪನಿಯ ಪ್ರತಿನಿಧಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಶ್ರೀ ಕುಮಾರ ಸ್ವಾಮಿ ಅವರು ರಾಜ್ಯದ ಕೈಗಾರಿಕಾ ಪ್ರಗತಿಗೆ ಪೂರಕವಾಗಿ ಕೇಂದ್ರದಿಂದ ಹೆಚ್ಚಿನ ಸಹಕಾರ ಒದಗಿಸುವತ್ತ ಗಮನಹರಿಸಬೇಕು ಎಂಬುದು ನಮ್ಮ ಆಶಯವಾಗಿದೆ. @hd_kumaraswamy

0:40
Indian Tech & Infra avatar
⟳ M B Patil retweeted
Indian Tech & Infra@IndianTechGuide·Nov 17

🚨 Reliance Group to invest Rs 1,600 crore in setting up a Campa Cola manufacturing plant in Vijayapura, Karnataka.

Post attachment
M B Patil avatar
M B Patil@MBPatil·18h

ಜಾಗತಿಕ ಏರೋಸ್ಪೇಸ್ ದಿಗ್ಗಜ ಕಾಲಿನ್ಸ್ ಏರೋಸ್ಪೇಸ್‌ನ ಭಾರತದ ಮೊದಲ ಪ್ರೊಪೆಲ್ಲರ್ ವಿಮಾನಗಳ MRO ಘಟಕಕ್ಕೆ ಭೂಮಿಪೂಜೆ ನೆರವೇರಿಸಿದೆ. ಈ ಕುರಿತು ನ್ಯೂಸ್ ಫಸ್ಟ್ ಪ್ರಸಾರ ಮಾಡಿರುವ ವರದಿ... @NewsFirstKan

3:00
M B Patil avatar
M B Patil@MBPatil·19h

ವಿಮಾನ ನಿಲ್ದಾಣಗಳ ನಿರ್ಮಾಣವಷ್ಟೇ ಅಲ್ಲ, ಅವುಗಳ ನಿರಂತರ ಕಾರ್ಯಾಚರಣೆಯೂ ನಮ್ಮ ಆದ್ಯತೆ! ಶೀಘ್ರದಲ್ಲೇ ರಾಜ್ಯಕ್ಕೆ ಸಮಗ್ರ ವಿಮಾನಯಾನ ನೀತಿ! ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ವಿಮಾನ ನಿಲ್ದಾಣಗಳು, ವಿಮಾನಗಳ ಹಾರಾಟವಿಲ್ಲದೆ ನಿಷ್ಕ್ರಿಯವಾಗುವುದು ನಮಗೆ ಇಷ್ಟವಿಲ್ಲ. ಪ್ರತಿಯೊಂದು ವಿಮಾನ ನಿಲ್ದಾಣವೂ ಜನರ ಬಳಕೆಗೆ ಲಭ್ಯವಾಗಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳನ್ನು ಒಳಗೊಂಡ ಸಮಗ್ರ ವಿಮಾನಯಾನ ನೀತಿಯನ್ನು ರೂಪಿಸುತ್ತಿದ್ದೇವೆ. ಪ್ರತಿ ನಿಲ್ದಾಣದಿಂದ ದಿನಕ್ಕೆ ಕನಿಷ್ಠ ಒಂದು ವಿಮಾನವಾದರೂ ಹಾರಾಟ ನಡೆಸುವಂತೆ ಮಾಡುವುದು ನಮ್ಮ ಗುರಿ. ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ, 'ಉಡಾನ್' ಯೋಜನೆಯಡಿ ಶಿವಮೊಗ್ಗಕ್ಕೆ ವಿಮಾನಯಾನ ಸೇವೆ ಮತ್ತೆ ಕಲ್ಪಿಸಲು ಪ್ರಯತ್ನಿಸಿದರೆ ಸ್ವಾಗತಿಸುತ್ತೇವೆ. ಇದರಿಂದ ದೇಶದ ಇತರ 17 ವಿಮಾನ ನಿಲ್ದಾಣಗಳಿಗೂ ಅನುಕೂಲವಾಗುವ ಸಾಧ್ಯತೆಯಿದೆ. ಅವರ ಪ್ರಯತ್ನ ಫಲಿಸಿದರೆ ಸಂತೋಷ; ಇಲ್ಲವಾದಲ್ಲಿ, ನಮ್ಮದೇ ಸಮಗ್ರ ವಿಮಾನಯಾನ ನೀತಿಯ ಮೂಲಕ ರಾಜ್ಯದ ಎಲ್ಲ ನಿಲ್ದಾಣಗಳಿಗೂ ವಿಮಾನಯಾನ ಸೇವೆ ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ. @BYRBJP #udan

1:44
M B Patil avatar
M B Patil@MBPatil·20h

Media reports on the groundbreaking of India’s first propeller aircraft MRO facility by Collins Aerospace , a landmark project that will create 2,100 direct jobs and further strengthen Karnataka’s position as a global aerospace and defence hub.

Post attachmentPost attachment
M B Patil avatar
M B Patil@MBPatil·20h

Global Wings for Karnataka’s Aerospace Sector! Delighted to perform the groundbreaking ceremony for India’s First Propeller Aircraft MRO Facility by Collins Aerospace at KIADB Aerospace Park, Devanahalli | 2,100 Direct Jobs Targeting ₹60,000 Crore in Investments and 60,000 Jobs in the Aerospace and Defence Sector by 2031! Spread across 26 acres at KIADB Aerospace Park, Devanahalli, this landmark facility will provide MRO services for propeller-driven aircraft, including ATR aircraft and defence aircraft, marking a significant addition to India’s aviation and defence maintenance capabilities. The project is expected to generate 2,100 direct jobs and further strengthen Karnataka’s position as a global aerospace hub. Collins Aerospace has invested $200 million in India over the past five years. I also recall inaugurating its manufacturing facility in Devanahalli last November. With nearly 65% of India’s aerospace sector concentrated in Karnataka, this facility will further enhance our aviation services exports and expand Collins Aerospace’s presence in the Asia-Pacific market. As demand for aviation and defence maintenance services grows, developing domestic MRO capabilities is vital to achieving self-reliance and accelerating economic growth. #CollinsAerospace @RTX_News

Post attachmentPost attachmentPost attachmentPost attachment
M B Patil avatar
M B Patil@MBPatil·23h

ಕರ್ನಾಟಕದ ಏರೋಸ್ಪೇಸ್ ವಲಯ ಮತ್ತಷ್ಟು ವಿಸ್ತಾರ ದೇಶದ ಮೊದಲ ಕಾಲಿನ್ಸ್ ಏರೋಸ್ಪೇಸ್ MRO ಘಟಕಕ್ಕೆ ಭೂಮಿಪೂಜೆ ನೆರವೇರಿಸುವ ಮೂಲಕ ಕರ್ನಾಟಕದ ವೈಮಾನಿಕ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದೆ. ನಮ್ಮ ಸರ್ಕಾರದ ನೂತನ ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿಯಡಿ 2031ರ ವೇಳೆಗೆ ₹60,000 ಕೋಟಿ ಹೂಡಿಕೆ ಆಕರ್ಷಿಸುವ ಹಾಗೂ 60,000 ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಜಾಗತಿಕ ಏರೋಸ್ಪೇಸ್ ಮತ್ತು ಡಿಫೆನ್ಸ್ ವಲಯದ ಪ್ರಮುಖ ಹೂಡಿಕೆ ತಾಣವಾಗಿ ಕರ್ನಾಟಕವನ್ನು ರೂಪಿಸುವ ನಮ್ಮ ಸರ್ಕಾರದ ಪ್ರಯತ್ನಗಳು ಸ್ಪಷ್ಟ ಫಲಿತಾಂಶ ನೀಡುತ್ತಿವೆ. #collinsaerospace #InvestKarnataka

1:05
M B Patil avatar
M B Patil@MBPatil·Nov 18

ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ಜಾಗತಿಕ ಏರೋಸ್ಪೇಸ್ ದಿಗ್ಗಜ ಕಾಲಿನ್ಸ್ ಏರೋಸ್ಪೇಸ್ ಸಂಸ್ಥೆಯ ಭಾರತದ ಮೊದಲ ಪ್ರೊಪೆಲ್ಲರ್ MRO ಘಟಕಕ್ಕೆ ಭೂಮಿಪೂಜೆ ನೆರವೇರಿಸಿದ್ದೇನೆ. ಈ ಮಹತ್ವದ ಯೋಜನೆಯಿಂದ 2,100 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ವಾಯುಯಾನ ಮತ್ತು ರಕ್ಷಣಾ ವಲಯದಲ್ಲಿ ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಮುಂಚೂಣಿಗೆ ಕೊಂಡೊಯ್ಯುವ ಹಾಗೂ ಯುವಜನತೆಗೆ ಬೃಹತ್ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ATR 42, ATR 72 ಹಾಗೂ C295 ವಿಮಾನಗಳಲ್ಲಿ ಬಳಸುವ ಪ್ರೊಪೆಲ್ಲರ್‌ಗಳ ನಿರ್ವಹಣೆ ಮತ್ತು ದುರಸ್ತಿ ಸೇವೆಗಳು ದೇಶದಲ್ಲೇ ಲಭ್ಯವಾಗಲಿದ್ದು, ಆಮದು ಅವಲಂಬನೆ ತಗ್ಗಿಸುವುದರ ಜೊತೆಗೆ ದೇಶೀಯ MRO ಸಾಮರ್ಥ್ಯ ವೃದ್ಧಿ, ತಾಂತ್ರಿಕ ಪರಿಣತಿ ಹಾಗೂ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲಿದೆ. #CollinsAerospace

Post attachment
M B Patil avatar
M B Patil@MBPatil·Nov 17

Glimpses from the groundbreaking ceremony of Collins Aerospace’s first MRO facility in India at KIADB Aerospace Park, Devanahalli. A significant boost to Karnataka’s aerospace ecosystem, creating 2,100+ direct jobs and advancing our vision of attracting ₹60,000 crore in investments and generating 60,000 jobs in the Aerospace & Defence sector by 2031. Building global capabilities. Creating opportunities. Powering Karnataka’s growth! #CollinsAerospace @RTX_News

0:32